Actress Priyamani completes three months of her married life with Mustafa Raj. Now Priyamani gives a good news to her fans. Priyamani to play lead in Kannada Movie 'Nanna Prakara'.
ಮೂರೇ ತಿಂಗಳಿಗೆ ತವರಿನವರಿಗೆ ಸಿಹಿಸುದ್ದಿ ಕೊಟ್ಟ ನಟಿ ಪ್ರಿಯಾಮಣಿ.! ನಟಿ ಪ್ರಿಯಾಮಣಿ-ಮುಸ್ತಫಾ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಸರಿಯಾಗಿ ಮೂರು ತಿಂಗಳು ಕಳೆದಿದೆ. ಮೂರೇ ತಿಂಗಳಿಗೆ ಪ್ರಿಯಾಮಣಿ ತವರಿನವರಿಗೆ ಸಿಹಿ ಸುದ್ದಿಯನ್ನ ಕೊಟ್ಟಿದ್ದಾರೆ. ಅಭಿಮಾನಿಗಳು ಕೂಡ ಫುಲ್ ಖುಷಿ ಪಟ್ಟಿದ್ದಾರೆ.ಮೂರೇ ತಿಂಗಳಿಗೆ ಸಿಹಿ ಸುದ್ದಿನಾ... ಅಂತ ಆಶ್ವರ್ಯ ಪಡಬೇಡಿ. ನಾವ್ ಹೇಳ್ತಿರೋದು ಸಿನಿಮಾ ವಿಚಾರ ಮಾತ್ರ. ಪ್ರಿಯಾಮಣಿ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ.ನನ್ನ ಪ್ರಕಾರ' ಎನ್ನುವ ಚಿತ್ರದಲ್ಲಿ ಪ್ರಿಯಾಮಣಿ ಆಕ್ಟ್ ಮಾಡುತ್ತಿದ್ದು ಇಂದು ಸಿನಿಮಾ ಸೆಟ್ಟೇರಿದೆ. 'ದನಕಾಯೋನು' ಸಿನಿಮಾದ ನಂತ್ರ ಯಾವುದೇ ಚಿತ್ರ ಒಪ್ಪಿಕೊಳ್ಳದ ಪ್ರಿಯಾಮಣಿ ಈಗ ಹೊಸಬರ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.ಇದೇ ವಾರದಿಂದ ಚಿತ್ರೀಕರಣ ಶುರುವಾಗಲಿದ್ದು, ವಿನಯ್ ಅನ್ನೋ ನವ ನಿರ್ದೇಶಕ ಸಿನಿಮಾವನ್ನ ಡೈರೆಕ್ಟ್ ಮಾಡ್ತಿದ್ದಾರೆ. ಚಿತ್ರದಲ್ಲಿ ಮಯೂರಿ, ಕಿಶೋರ್ ಹಾಗೂ ವಿಹಾನ್ ಗೌಡ ಇನ್ನೂ ಅನೇಕರು ಅಭಿನಯಿಸ್ತಿದ್ದಾರೆ. ಜಿ.ವಿ.ಕೆ ಕಂಬೈನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗ್ತಿದ್ದು, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮೂರು ಶೆಡ್ಯೂಲ್ ನಲ್ಲಿ ಚಿತ್ರೀಕರಣ ಮುಗಿಸಿ ಮಾರ್ಚ್ ಅಂತ್ಯದ ವೇಳೆಗೆ ಸಿನಿಮಾವನ್ನ ತೆರೆಗೆ ತರೋದಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ.